- ಡಾ ಅಶೋಕ್. ಕೆ. ಆರ್.
ಚಂದ್ರಶೇಖರ
ಕಂಬಾರರಿಗೆ ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಸಿಕ್ಕಿದೆ. ಕನ್ನಡಕ್ಕೆ ದಕ್ಕಿದ ಎಂಟನೇ ಜ್ಞಾನಪೀಠ.
ಈ ಬಗ್ಗೆ ಸಮಸ್ತರೂ ಸಂತಸ ಪಡಬೇಕಾದ ಸಮಯದಲ್ಲಿ ‘ಅಯ್ಯೋ ನಮ್ಮ ಭೈರಪ್ಪನವರಿಗೆ ಸಿಗಲಿಲ್ಲವಲ್ಲ. ಬರೀ
ರಾಜಕೀಯ’ ಎಂದು ಕೆಲವರು ಹಲುಬುತ್ತಿದ್ದಾರೆ. ನನ್ನ ಗೆಳೆಯನೊಬ್ಬ ‘ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠ
ಅದು ಅಜ್ಞಾನಪೀಠ’ ಎಂದು ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ಬರುವ ‘ಹಿಂದೂ’ ಧರ್ಮದ ರಕ್ಷಕನಂತೆಯೇ
ಉಗ್ರವಾಗಿ ಮೆಸೇಜು ಕಳುಹಿಸಿದ್ದ. ಮೂರು ವರ್ಷದ ನಂತರ ಭೈರಪ್ಪನವರಿಗೆ ಜ್ಞಾನಪೀಠ ದೊರಕಿದಾಗಲೂ ಆಗಲೂ
ಈ ಭಕ್ತಿವೃಂದ ‘ರಾಜಕೀಯವಿದು’ ಎಂದು ಹಲುಬುತ್ತಾರಾ?!