Jul 27, 2011

25,228 ಪುಟಗಳು ರದ್ದಿಗಾ??!

Individual photos from net edited by author

-->
ಅಶೋಕ್. ಕೆ.ಅರ್
ಪತ್ರಕರ್ತ ಗೆಳೆಯ ಅವಿಗೆ ಹಿಂದೊಮ್ಮೆ ನಿಮಗೆ ಬಿಡಪ್ಪ ಜನ ಸತ್ತರೂ ಖುಷಿಯಾಗ್ತೀರಾ ಬರೆಯೋದಿಕ್ಕೆ ಸರಕು ಸಿಗ್ತು ಅಂತ ರೇಗಿಸಿದ್ದಾಗ “ನೋಡಪ್ಪಾ ಆ್ಯಕ್ಸಿಡೆಂಟ್ ಆಗಿದ್ದು ಕೊಲೆ ಆಗಿದ್ದು ಒಳ್ಳೆ ಘಟನೆ ಅಲ್ಲ ಆದರೆ ಸುದ್ದಿಯ ಸಂಗ್ರಹದ ವಿಚಾರಕ್ಕೆ ಬಂದರೆ ಅದು ಒಳ್ಳೆ ಸುದ್ದಿ” ಎಂದು ಒಂದಷ್ಟು ಖಾರವಾಗೇ ಪ್ರತಿಕ್ರಯಿಸಿದ್ದ. ಸುದ್ದಿಗೂ ಘಟನೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದ. ಒಬ್ಬ ಪತ್ರಕರ್ತನಿಗೆ ಒಳ್ಳೆ ಸುದ್ದಿಯಾಗುವ ಇಂಥ ಸಂಗತಿಗಳು ಕೆಟ್ಟ ಘಟನೆಯಾಗಿ ಓದುಗರ ಮನ ತಲುಪಿದರೆ ಆಗ ಆ ಪತ್ರಕರ್ತನನ್ನು ಯಶಸ್ವಿಯೆಂದು ಕರೆಯಬಹುದೇನೋ? ಆದರೆ ಈಗಿನ ದಿನಗಳಲ್ಲಿ ಕೆಟ್ಟ ಘಟನೆಗಳು ಕೂಡ ಓದುಗರಿಗೆ ಕೇವಲ ಸುದ್ದಿಯಾಗಷ್ಟೇ ತಲುಪುತ್ತಿದೆ. ಇದು ಪತ್ರಕರ್ತರ ಸೋಲಾ ಅಥವಾ ಜನರ ಮನಸ್ಸಿನ ಸೂಕ್ಷ್ಮತೆಯ ಮಟ್ಟವೇ ಕಡಿಮೆಯಾಗುತ್ತಿದೆಯಾ?
ಕೊನೆಗೂ ಲೋಕಾಯುಕ್ತರ ವರದಿ ಅಧಿಕೃತವಾಗಿ ‘ಬಿಡುಗಡೆ’ಯಾಗಿದೆ. 25,228 ಪುಟಗಳ ಬೃಹತ್ ವರದಿ. ಮುಖ್ಯ ವರದಿಯೇ 943 ಪುಟಗಳು!! ನಿರೀಕ್ಷೆಯಂತೆ ರಾಜ್ಯವನ್ನು ‘ಆಳಿದವರೆಲ್ಲ’ ತಮ್ಮ ಶಕ್ತ್ಯಾನುಸಾರ ದೋಚಿದ್ದಾರೆ, ಲೂಟಿಗೈದಿದ್ದಾರೆ. 2006 ರಿಂದ 2010 ರವರೆಗೆ ನಮ್ಮ ರಾಜ್ಯಕ್ಕಾಗಿರುವುದು ಕೇವಲ 16,085 ಕೋಟಿ ರುಪಾಯಿ ನಷ್ಟ. ಈ ವರದಿಯ ಪರಿಣಾಮಗಳೇನಾಗಬಹುದು? ಯಾರಿಗಾದರೂ ಶಿಕ್ಷೆಯಾದೀತಾ? ಅಥವಾ ಇನ್ನಿತರ ವರದಿಗಳಂತೆ ಈ ಬೃಹತ್ ವರದಿ ಕೂಡ ರದ್ದಿಗೆ ಸೇರಿಬಿಡುತ್ತಾ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ – ಮೂರು ಪಕ್ಷಗಳ ಮುಖಂಡರ ಹೆಸರುಗಳು ವರದಿಯಲ್ಲಿ ಇರುವುದನ್ನು ಗಮನಿಸಿದಾಗ ಹೊರಗೆ ಎಷ್ಟೇ ನಿಷ್ಠಾವಂತರಂತೆ ತೋರಿಸಿಕೊಳ್ಳುವ ಮುಖಂಡರಲ್ಲೂ ಕೂಡ ಈ ವರದಿ ಕೇವಲ ವರದಿಯಾಗಷ್ಟೇ ಉಳಿಯಲಿ ಎಂಬ ಆಸೆ ಇದ್ದೇ ಇರುತ್ತದೆ.
ಇಂಥದೇ ಸುದ್ದಿಗಳನ್ನು ಓದಿ, ಕೇಳಿ, ನೋಡಿ ನಮಗೆ ಅಂದರೆ ಅಧಿಕಾರದ ವ್ಯಾಪ್ತಿಯಿಂದ ಹೊರಗಿರುವ ಜನರಿಗೆ ಬೇಸರ, ಸಿನಿಕತನ ಮೂಡಿಬಿಟ್ಟಿದೆಯಾ? 24ಘಂಟೆಯ ಟಿ.ವಿ. ವಾಹಿನಗಳ ಪ್ರಭಾವವಿದ್ದಾಗ್ಯೂ ಈ ಸಂಗತಿಗಳು ನಮ್ಮಲ್ಲಿ ಸಿಟ್ಟು ಮೂಡಿಸುತ್ತಿಲ್ಲವಲ್ಲ ಯಾಕೆ? ಭೃಷ್ಟರಾಗದೆ ನಮ್ಮ ದೇಶದಲ್ಲಿ ರಾಜಕೀಯ ಮಾಡುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದೀವಾ? ನಮ್ಮ ರಾಜ್ಯದಲ್ಲಿ ಅಜಮಾಸು ನಾಲ್ಕೈದು ವರ್ಷದಿಂದ ನಡೆಯುತ್ತಿರುವ ರಾಜಕೀಯದ ಹೀನ ನಡೆಗಳು ನಮ್ಮಲ್ಲಿ ಸಿಟ್ಟು ಅಸಹ್ಯ ಕೊನೆ ಪಕ್ಷ ಬೇಸರವನ್ನಾದರೂ ಮೂಡಿಸಬೇಕಿತ್ತು ಆದರೆ ನಾವು ಈ ಘಟನೆಗಳನ್ನೆಲ್ಲ ಮನೋರಂಜನೆಯ ಸರಕಿನಂತೆ, ಹಾಸ್ಯೋತ್ಸವದಂತೆ, ನಗೆ ಧಾರವಾಹಿಗಳಂತೆ ಸ್ವೀಕರಿಸಿದೆವಲ್ಲ!! ನಮ್ಮ ಯೋಚಿಸುವ, ಚಿಂತಿಸುವ ಶಕ್ತಿ ಮಾಯವಾಗಿದ್ದಾದರೂ ಯಾವಾಗ?   

2 comments:

  1. You have stolen words from my mouth..
    Even I have strongest objections to the role played by the 24*7 media...
    Politicians and bureaucrats are corrupt in every country(they vary in degree and not kind), but the sadest part in India is that media also are party to all the corruption. One word that comes to my mind when I think of these news channels is "Bastards".

    Please continue your writing... I will try to contribute as well

    ReplyDelete
  2. First thing, thinking that 16,085 crores is a permanant LOSS to the state itself shows that the media is half way accepting the defeat in fighting corruption. Its only loss unless RECOVERED.

    Second thing, not only the politicians, but the BIG named SWAMIJIs who were supporting these politicians should also be brought to custody.Does the media have guts to point a finger at these so called RELIGIOUS(?) leaders(?).
    Its very difficult to fight corruption, unless people think politicians as not leaders but servants and also use their brains rather than the supporting blindly just because some swamiji said so.

    ReplyDelete