Jul 27, 2011

25,228 ಪುಟಗಳು ರದ್ದಿಗಾ??!

Individual photos from net edited by author

-->
ಅಶೋಕ್. ಕೆ.ಅರ್
ಪತ್ರಕರ್ತ ಗೆಳೆಯ ಅವಿಗೆ ಹಿಂದೊಮ್ಮೆ ನಿಮಗೆ ಬಿಡಪ್ಪ ಜನ ಸತ್ತರೂ ಖುಷಿಯಾಗ್ತೀರಾ ಬರೆಯೋದಿಕ್ಕೆ ಸರಕು ಸಿಗ್ತು ಅಂತ ರೇಗಿಸಿದ್ದಾಗ “ನೋಡಪ್ಪಾ ಆ್ಯಕ್ಸಿಡೆಂಟ್ ಆಗಿದ್ದು ಕೊಲೆ ಆಗಿದ್ದು ಒಳ್ಳೆ ಘಟನೆ ಅಲ್ಲ ಆದರೆ ಸುದ್ದಿಯ ಸಂಗ್ರಹದ ವಿಚಾರಕ್ಕೆ ಬಂದರೆ ಅದು ಒಳ್ಳೆ ಸುದ್ದಿ” ಎಂದು ಒಂದಷ್ಟು ಖಾರವಾಗೇ ಪ್ರತಿಕ್ರಯಿಸಿದ್ದ. ಸುದ್ದಿಗೂ ಘಟನೆಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದ. ಒಬ್ಬ ಪತ್ರಕರ್ತನಿಗೆ ಒಳ್ಳೆ ಸುದ್ದಿಯಾಗುವ ಇಂಥ ಸಂಗತಿಗಳು ಕೆಟ್ಟ ಘಟನೆಯಾಗಿ ಓದುಗರ ಮನ ತಲುಪಿದರೆ ಆಗ ಆ ಪತ್ರಕರ್ತನನ್ನು ಯಶಸ್ವಿಯೆಂದು ಕರೆಯಬಹುದೇನೋ? ಆದರೆ ಈಗಿನ ದಿನಗಳಲ್ಲಿ ಕೆಟ್ಟ ಘಟನೆಗಳು ಕೂಡ ಓದುಗರಿಗೆ ಕೇವಲ ಸುದ್ದಿಯಾಗಷ್ಟೇ ತಲುಪುತ್ತಿದೆ. ಇದು ಪತ್ರಕರ್ತರ ಸೋಲಾ ಅಥವಾ ಜನರ ಮನಸ್ಸಿನ ಸೂಕ್ಷ್ಮತೆಯ ಮಟ್ಟವೇ ಕಡಿಮೆಯಾಗುತ್ತಿದೆಯಾ?

Jul 22, 2011

ತೊಡಿಕಾನ, ದೇವರಗುಂಡಿ ಮತ್ತು ಸರಕಾರದ ಹುಂಡಿ!!

ಅಶೋಕ್. ಕೆ.ಅರ್
ಒಂದು ಕಡೆ ಎಕ್ಸಪ್ರೆಸ್ ಹೈವೇ,ಬೆಂಗಳೂರು ಮೈಸೂರು  ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ, ಆರು ಲೇನ್ - ಎಂಟು ಲೇನ್ ರಸ್ತೆ, ದೊಡ್ಡ ನಗರಗಳಲ್ಲಿ ಹೆಜ್ಜೆಗೊಂದರಂತೆ ಫ್ಲೈಓವರ್ ಗಳು, ಸಬ್ವೇಗಳು - ಆಹಾ!! ಸಂಪೂರ್ಣ  ಅಭಿವೃದ್ಧಿಯಾಗಿಬಿಟ್ವಲ್ಲ!! ಇನ್ನೊಂದೆಡೆ ಪ್ರಾಚೀನ ಯುಗದಲ್ಯಾವಾಗಲೋ ಟಾರು ಕಂಡಿದ್ದ ರಸ್ತೆಗಳು. ದಪ್ಪ ಜಲ್ಲಿ ಕಲ್ಲಿನ ಮೊನಚಾದ ತುದಿಗಳು ನಮ್ಮ ಸ್ವಾಗತಕ್ಕೆ ಮುಗಿಲೆಡೆಗೆ ಮುಖ ಮಾಡಿ ನಿಂತಿರುವ ರಸ್ತೆಗಳು. ಇಂತಿಪ್ಪ ರಸ್ತೆಗಳನ್ನು ದಾಟಿ ಮುನ್ನಡೆದರೆ ಮತ್ತಷ್ಟು ಹಿಂದಿನ ಯುಗವನ್ನೂ ತೋರಿಸುವ ಮಣ್ಣಿನ ರಸ್ತೆಗಳು. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಗಳು.
ತೊಡಿಕಾನದಿಂದ ದೇವರಗುಂಡಿಯೆಡೆಗೆ ಹೋಗುವ ರಸ್ತೆಯಲ್ಲಿ ಸಂಚರಿಸಿದಾಗ ಬಂದ ಭಾವನೆಯಿದು. ಇಂಥ ರಸ್ತೆಗಳನ್ನು ಬಯಲುಸೀಮೆಯಲ್ಲೂ ಕಾಣಬಹುದಾದರೂ ಇಲ್ಲಿ ಅದೂ ಮಳೆಗಾಲದಲ್ಲಿ ಇಂಥ ರಸ್ತೆಗಳಲ್ಲಿ ಸಂಚರಿಸುವುದು ಹೊಸಬರಿಗೆ ಸಾಹಸವೇ ಸರಿ. ಅದೂ ಬೈಕಿನಲ್ಲಿ ಮತ್ತಷ್ಟು ಕಷ್ಟದ ಕೆಲಸ.

Jul 21, 2011

ಭಿನ್ನಹ

ಮನದ ಮೂಲೆಯ
ಕತ್ತಲು ಕೋಣೆಯಾದರೂ ಸರಿಯೇ
ನನಗೊಂದು ಪುಟ್ಟ ಜಾಗವಿರಲಿ.
ನಿನ್ನ ಗರ್ಭದೊಳಗೆನ್ನ
ಬೆಚ್ಚಗೆ ಪೋಷಿಸು
ತಿಂಗಳಅಂತ್ಯಕ್ಕೆ ಹೊರದಬ್ಬಬೇಡ.
ಕಾಡುವ ಬೇಡುವ ಆಸೆಯಿಲ್ಲ
ಒಂದಾಗಬೇಕು
ನಿನ್ನೊಳಗೆ ಒಂದಾಗಬೇಕು .
-ಅಶೋಕ್. ಕೆ.ಅರ್